ಬಿಲ್ವ ಪತ್ರೆ

Bilvapatre

ಬಿಲ್ವಪತ್ರೆಗೆ ಸಂಸ್ಕೃತದಲ್ಲಿ 'ಬಿಲ್ವಾ' ಅಥವಾ 'ಶ್ರೀಫಲ' ಎಂಬ ಹೆಸರಿದೆ.

ಶಿವನ ಪೂಜೆಗೆ ಬಿಲ್ವ ಪತ್ರೆ ಶ್ರೇಷ್ಠವಾದುದು ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ ಬಿಲ್ಪ ಪತ್ರೆಯ ಮರವು ಪಾರ್ವತಿಯ ಬೆವರ ಹನಿಗಳಿಂದ ಹುಟ್ಟಿಕೊಂಡಿತಂತೆ. ಈ ಮರವು ಪಾರ್ವತಿ ದೇವಿಯ ಆವಾಸ ಸ್ಥಾನವಾಗಿರುವುದರಿಂದಾಗಿ ಇದು ಶಿವನ ಪ್ರೀತಿ ಪಾತ್ರ ಮರವಾಗಿದೆ. ಅದರಲ್ಲೂ ಸ್ವತಃ ಪಾರ್ವತಿಯೇ ಈ ಮರದ ಎಲೆಗಳಾಗಿರುವುದರಿಂದಾಗಿ ಆ ಎಲೆಗಳೆಂದರೆ ಶಿವನಿಗೆ ಇನ್ನೂ ಅಚ್ಚು ಮೆಚ್ಚು.

ಶಿವಭಕ್ತ ಕಣ್ಣಪ್ಪನ ಕಥೆಯಲ್ಲಿ ಬಿಲ್ವಪತ್ರೆ ಪಾತ್ರ ವಿಶೇಷವಾಗಿದೆ.

ಬಿಲ್ವ ಪತ್ರೆಯಲ್ಲಿ ಮೂರು ದಳಗಳಿರುತ್ತವೆ. ಆ ಮೂರು ದಳಗಳು: ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಸಂಕೇತವೆಂದು ನಂಬಲಾಗಿದೆ.

ಔಷಧೀಯ ಗುಣಗಳು

  • ಬಿಲ್ವ ಪತ್ರೆಯ ಬೇರು, ತೊಗಟೆ, ಎಲೆಗಳು, ಹಣ್ಣುಗಳು ಪ್ರತಿಯೊಂದು ಸಹ ವಿವಿಧ ಬಗೆಯ ಔಷಧೀಯ ಗುಣಗಳನ್ನು ಹೊಂದಿದೆ.
  • ಒಂದು ಹಿಡಿಯಷ್ಟು ಬಿಲ್ವಪತ್ರೆಯ ಎಲೆಯನ್ನು ಚೆನ್ನಾಗಿ ಜಜ್ಜಿ ಬಿಸಿ ನೀರಿನೊಂದಿಗೆ ಖಾಲಿ ಹೊಟ್ಟೆಗೆ ಬೆಳಿಗ್ಗೆ ಮತ್ತು ಸಂಜೆ ಸೇವಿಸಿದರೆ ಮಧುಮೇಹ ರೋಗ ತಹಬದಿಗೆ ಬರುತ್ತದೆ.
  • ಅರೆ ಬಲಿತ ಬಿಲ್ವದ ಹಣ್ಣಿನ ತಿರುಳನ್ನು ಚೆನ್ನಾಗಿ ಒಅಣಗಿಸಿ ಪುಡಿ ಮಾಡಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಬಿಸಿ ನಿರಿನಲ್ಲಿ ಸೇವಿಸುವುದರಿಂದ ಬೇಧಿ ನಿಯತ್ರಣಕ್ಕೆ ಬರುತ್ತದೆ.
  • ಬಿಲ್ವ ಹಣ್ಣಿನ ತಿರುಳನ್ನು ಉಪಯೊಗಿಸಿ ತಯಾರಿಸಿದ ಪಾನಕ, ಅಜೀರ್ಣ ಮತ್ತು ಮೂಲವ್ಯಾಧಿಯಿಂದ ನರಳುತ್ತಿರುವ್ವರಿಗೆ ಉತ್ತಮ ಔಷಧ. ಕರುಳು ಹುಣ್ಣಿನ ಸಮಸ್ಯೆಯನ್ನು ಕೂಡ ಇದು ನಿವಾರಿಸುತ್ತದೆ.
  • ಹುರಿದ ಬಿಲ್ವದ ಕಾಯಿಯ ತಿರುಳು ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಈ ತಿರುಳನ್ನು ಸಕ್ಕರೆ, ಜೇನು ಅಥವಾ ಬೆಲ್ಲದೊಂದಿಗೆ ಸೇವಿಸಬಹುದು. ಮಜ್ಜಿಗೆಯೊಂದಿಗೆ ದಿನಕ್ಕೊಂದು ಬಾರಿ ಸೇವಿಸಿದರೆ ರಕ್ತಸ್ರಾವದಿಂದ ಕೂಡಿದ ಮೂಲವ್ಯಾಧಿ ಶಮನವಾಗುತ್ತದೆ.
  • ಎರಡು ಚಮಚದಷ್ಟು ಬಿಲ್ವ ರಸವನ್ನು ಸೇವಿಸುವುದರಿಂದ, ಜ್ವರ, ಕೆಮ್ಮು, ನೆಗಡಿ, ವಾತ ಹಾಗೂ ಕಫದ ಸಮಸ್ಯೆ ದೂರವಾಗುತ್ತದೆ.
  • ಬಿಲ್ವಪತ್ರೆಯ ಎಲೆಯ ರಸವನ್ನು ಪ್ರತೆದಿನ ಮೂರು ಅಥವಾ ನಾಲ್ಕು ಚಮಚ ಸೇವಿಸುವುದರಿಂದ ಮೂತ್ರಾಂಗಗಳಿಗೆ ಸಂಬಂಧಿಸಿದ ವ್ಯಾಧಿ ಮತ್ತು ಸ್ರೀಯರ ಅತುಯಾದ ಮಾಸಿಕ ಸ್ರಾವದ ತೊಂದರೆ ಉಪಶಮನವಗುತ್ತದೆ.
  • ಹತ್ತು ಗ್ರಾಂನಷ್ಟು ಬಿಲ್ವದ ಬೇರಿನ ಪುಡಿಯನ್ನು ಒಂದು ಲೀಟರ್ ನೀರಿನಲ್ಲಿ ಕುದಿಸಿ. ಅನ್ನದ ಗಂಜಿಯೊಡನೆ ಸಕ್ಕರೆ ಬೆರೆಸಿ ಮಕ್ಕಳಿಗೆ ನೀಡಿದರೆ ಆಗುತ್ತಿರುವ ಬೇಧಿ ನಿಲ್ಲುತ್ತದೆ.
  • ಎರಡು ಚಮಚ ಬಿಲ್ವಪತ್ರೆಯ ರಸದಲ್ಲಿ ಕರಿಮೆಣಸಿನ ಪುಡಿ ಬೆರೆಸಿ ಸೇವಿಸಿದರೆ ಕಾಮಾಲೆ ಹಾಗೂ ಮಲಬದ್ಧತೆ ಶಮನವಾಗುತ್ತದೆ.
  • ಬಿಲ್ವದ ತೊಗಟೆಯ ಕಷಾಯ ಮಲೇರಿಯಾ ರೋಗಕ್ಕೆ ಅತ್ಯಂತ ಪರಿಣಾಮಕಾರಿ ಔಷಧ.